ಗೋಶಾಲೆಗೆ ತಿಪಟೂರು ಕಾಲೇಜು ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ
ಈ ದಿನ ತುಮಕೂರು ಜಿಲ್ಲೆ ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಕೋಶದ NSS ನ ಅಡಿಯಲ್ಲಿ ಅಧ್ಯಯನ ಪ್ರವಾಸಕ್ಕೆ ಅರಸೀಕೆರೆಯ ಬಿ ಹೆಚ್ ರಸ್ತೆಯಲ್ಲಿರುವ ಜಾಜೂರಿನ ಶ್ರೀ ಸಂಕಟ ಮೋಚನ ಪಾರ್ಶ...

ಈ ದಿನ ತುಮಕೂರು ಜಿಲ್ಲೆ ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಕೋಶದ NSS ನ ಅಡಿಯಲ್ಲಿ ಅಧ್ಯಯನ ಪ್ರವಾಸಕ್ಕೆ ಅರಸೀಕೆರೆಯ ಬಿ ಹೆಚ್ ರಸ್ತೆಯಲ್ಲಿರುವ ಜಾಜೂರಿನ ಶ್ರೀ ಸಂಕಟ ಮೋಚನ ಪಾರ್ಶ್ವ ಭೈರವ ಗೋಶಾಲೆಗೆ ಅಧ್ಯಯನ ಪ್ರವಾಸಕ್ಕೆ ಬಂದಿದ್ದರು , ವಿದ್ಯಾರ್ಥಿಗಳಿಗೆ ಹೈನುಗಾರಿಕೆ ಮತ್ತು ಕೃಷಿ ಗೆ ಗೋವುಗಳಿಂದ ಆಗುವ ಅನುಕೂಲಗಳು ಮತ್ತು ಲಾಭಗಳು ಮತ್ತು ನಂತರದ ದಿನಗಳಲ್ಲಿ ಅವುಗಳನ್ನು ಯಾವ ರೀತಿ ಪಾಲನೆ ಮಾಡಬೇಕು ಎನ್ನುವುದರ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು , ಗೋವುಗಳಿಗೆ ವಿದ್ಯಾರ್ಥಿಗಳ ಕೈಯಲ್ಲಿ ಆಹಾರವನ್ನು ಕೊಡಿಸಲಾಯಿತು , ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಹೆಚ್ ಎಂ ರುದ್ರೇಶ್ ಸರ್ ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಹೈನುಗಾರಿಕೆ , ಕೃಷಿ , ಸ್ವಚ್ಛತೆ , ಪರಿಸರದ ಬಗ್ಗೆ ಕಾಳಜಿ ತಿಳಿಸಲು ಈ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ ಎಂದರು, ಪ್ರೋಗ್ರಾಮರ್ ಶೋಭ ರಾಣಿಯವರು ಮಾತನಾಡಿ ಈ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಅಧ್ಯಯನಕ್ಕೆ ಅನುಕೂಲವಾಯಿತು ಎಂದು ತಿಳಿಸಿದರು , ಗೋಶಾಲೆಯ ಮ್ಯಾನೇಜರ್ ಮೋಹನ್ ಕುಮಾರ್ ಅವರ ಮಾತನಾಡಿ ವಿದ್ಯಾರ್ಥಿಗಳನ್ನು ಈ ರೀತಿ ಗೋಶಾಲೆಗೆ ಕರೆದುಕೊಂಡು ಬಂದು ಅವರಿಗೆ ಹೈನುಗಾರಿಕೆ ಕೃಷಿ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಕಾಲೇಜು ನವರು ಕಾಳಜಿ ವಹಿಸಿರುವುದು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು,



