ಅರಸೀಕೆರೆ ಲಯನ್ಸ್ ಗೆ ಬೋತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ದಿನಾಂಕ 4-10.2026 ಭಾನುವಾರದಂದು ಲಯನ್ಸ್ ಕ್ಲಬ್ ಕಲ್ಪತರು ಅರಸಿಕೆರೆ ವತಿಯಿಂದ ಲಯನ್ಸ್ ಡಾಕ್ಟರ್ ಗಳ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ಬೃಹತ್ ರಕ್ತದಾನ ಶಿಬಿರ ಅರಸೀಕೆರೆ ಶ್ರೀ ಪ್ರಸನ್...

ದಿನಾಂಕ 4-10.2026 ಭಾನುವಾರದಂದು ಲಯನ್ಸ್ ಕ್ಲಬ್ ಕಲ್ಪತರು ಅರಸಿಕೆರೆ ವತಿಯಿಂದ ಲಯನ್ಸ್ ಡಾಕ್ಟರ್ ಗಳ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ಬೃಹತ್ ರಕ್ತದಾನ ಶಿಬಿರ ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಒಂದು ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರು ಆರೋಗ್ಯ ಸೇವೆಯ ಉಚಿತ ಅವಕಾಶವನ್ನು ಲಯನ್ಸ್ ಕ್ಲಬ್ ಒದಗಿಸಿದ್ದು ವಿಶೇಷವಾಗಿತ್ತು. 33ಕ್ಕೂ ಹೆಚ್ಚು ರಕ್ತಧಾನಿಗಳು ರಕ್ತದಾನ ಮಾಡಿದರು. ಇಂತಹ ಸೇವಾ ಕಾರ್ಯಕ್ರಮವನ್ನು ಮಾಡುವ ಮೂಲಕ ಜನರಿಗೆ ಆರೋಗ್ಯದ ಕಾಳಜಿಯನ್ನು ತಿಳಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಡಾಕ್ಟರ್ ಎಚ್ ಬಿ ಸತೀಶ್ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಭರತ್ ಕ್ಯಾನ್ಸರ್ ಹಾಸ್ಪಿಟಲ್, ಮೈಸೂರಿನ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಹಾಸನದ ಎನ್ ಟಿ ಆರ್ ಕೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಅಗರವಾಲ್ ಕಣ್ಣಿನ ಆಸ್ಪತ್ರೆ ಹಾಸನದ ವೈದ್ಯರು ಮತ್ತು ಸಿಬ್ಬಂದಿ ಮತ್ತು ಸ್ವಯಂ ಪ್ರೇರಿತ ರಕ್ತದಾನ ಸಂಸ್ಥೆ ಚನ್ನರಾಯಪಟ್ಟಣದ ವೈದ್ಯರು ಮತ್ತು ಸಿಬ್ಬಂದಿ ಭಾಗವಹಿಸಿ ತುಂಬಾ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದರು.ಲಯನ್ಸ್ ಕ್ಲಬ್ ನ ಎಲ್ಲ ವೈದ್ಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ತುಂಬಾ ವಿಶೇಷವಾಗಿತ್ತು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿಗಳಾದ ಬಿ ಪರಮೇಶ್ . ಸಂಸ್ಥಾಪಕ ಅಧ್ಯಕ್ಷರಾದ ಎನ್ ವೆಂಕಟೇಶ್ ಸಂಸ್ಥಾಪಕ ಕಚಾಚಿಗಳಾದ ಮಂಜುನಾಥ್ ಪಿ ಎಸ್ ಹಾಗೂ ಹಿರಿಯ ಸದಸ್ಯರಾದ ನಗರಸಭೆ ಪರಮೇಶ್ ಆಂಟೋನಿ ಮರಿಯಾ ಪ್ರತಾಪ್ ಯೋಗ ಮೂರ್ತಿ ಶೇಖರಪ್ಪ ಅರುಣ್ ಕುಮಾರ್ ಗಿರೀಶ್ ಉಮೇಶ್ ಹಾಗೂ ಇತರ ಸದಸ್ಯರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.o
