ಮುಖ್ಯ ವಿಷಯಕ್ಕೆ ಹೋಗಿ
Latest
ಕರ್ನಾಟಕ

ಹಾಸನದಲ್ಲಿ ನಡೆದ ಅದ್ದೂರಿ ಶ್ರೀ ಕೃಷ್ಣ ಜಯಂತಿ ಉತ್ಸವ

ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಹಾಸನ ಜಿಲ್ಲಾ ಯಾದವ ಗೊಲ್ಲ ಸಂಘದ ಸಂಯುಕ್ತ ಆಶ್ರಯದಲ್ಲಿ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ...

ನಿರ್ವಾಹಕ· 1 ನಿಮಿಷ ಓದು· ಹಾಸನ
ಹಂಚಿಕೊಳ್ಳಿ:

ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಹಾಸನ ಜಿಲ್ಲಾ ಯಾದವ ಗೊಲ್ಲ ಸಂಘದ ಸಂಯುಕ್ತ ಆಶ್ರಯದಲ್ಲಿ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಗೊಲ್ಲ ಯಾದವ ಸಂಘದ ಅಧ್ಯಕ್ಷ ಡಿಟಿ ಶ್ರೀನಿವಾಸ್ ಮಾತನಾಡಿ ಯಾದವ ಸಮುದಾಯದಲ್ಲಿ ಹುಟ್ಟಿದ ಶ್ರೀ ಕೃಷ್ಣ ಇಂದು ದೇಶಕ್ಕೆ ಮಾದರಿಯಾಗಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಶ್ರೀಕೃಷ್ಣನನ್ನು ರಾಜಕೀಯವಾಗಿ ಬಳಸಿಕೊಂಡು ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತಿರುವುದು ಸರಿಯಲ್ಲ ರಾಜ್ಯದಲ್ಲಿ ಗೊಲ್ಲ ಹಾಗೂ ಯಾದವ ಸಮುದಾಯದ ಸಂಖ್ಯೆ ಲಕ್ಷಾಂತರ ಇದ್ದು ಕೆಲವು ಕಡೆ ಮೂಲಭೂತ ಕೊರತೆ ಇದೆ ಬೇಡಿಕೆಗಳನ್ನ ಈಡೇರಿಕೆಗೆ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ತಿಳಿಸಿದರು ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಾಟೀಲ್ ಮಾತನಾಡುತ್ತಾ ಮಹಾಭಾರತ ಯುದ್ಧದಲ್ಲಿ ಅರ್ಜುನ ಅಸಹಾಯಕನಾಗಿದ್ದಾಗ ಕೃಷ್ಣ ಬೋಧಿಸಿದ ಭಗವದ್ಗೀತೆ ಜಗತ್ತಿನ ಅತ್ಯುನ್ನತ ತತ್ವ ಜ್ಞಾನ ಗ್ರಂಥವಾಗಿದೆ ಇಂತಹ ಮೇಧಾವಿಯನ್ನು ಆರಾಧ್ಯ ದೈವ ಎಂದು ಹೇಳುವುದರಲ್ಲಿ ತಪ್ಪಿಲ್ಲವೆಂದು ತಮ್ಮ ಸಂದೇಶದಲ್ಲಿ ತಿಳಿಸಿದರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಚ್ಎಲ್ ಮಲ್ಲೇಶ್ ಗೌಡ ಅವರು ಮಾತನಾಡಿ ಭರತಖಂಡದ ಧರ್ಮ ಸಂಸ್ಕೃತಿ ಭಾರತಕ್ಕೆ ಮೂಲ ಭಾರತೀಯ ಇತಿಹಾಸ ಮತ್ತು ಪುರಾಣಗಳಲ್ಲಿ ಶ್ರೀ ಕೃಷ್ಣನನ್ನು ಕೇವಲ ಒಬ್ಬ ದೇವರೆಂದು ಮಾತ್ರವಲ್ಲದೆ ಮಹಾನ್ ರಾಜ ತಾಂತ್ರಿಕ ಸಮಾಜ ಸುಧಾರಕರೆಂದದರು

ಹಂಚಿಕೊಳ್ಳಿ: